ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಜಿಲ್ಲೆಯಾದ್ಯಂತ ನೆರೆಪ್ರಭಾವಿತರಿಗೆ ಸರ್ಕಾರದಿಂದ ಸಕಾಲದಲ್ಲಿ ನೆರವು

ಭಟ್ಕಳ: ಜಿಲ್ಲೆಯಾದ್ಯಂತ ನೆರೆಪ್ರಭಾವಿತರಿಗೆ ಸರ್ಕಾರದಿಂದ ಸಕಾಲದಲ್ಲಿ ನೆರವು

Sun, 11 Oct 2009 15:08:00  Office Staff   S.O. News Service
ಭಟ್ಕಳ, ಅಕ್ಟೋಬರ್ 11:  ಇತ್ತಿಚೆಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣ ಸ್ವತ್ತುಗಳು ನಷ್ಟವನ್ನುಂಟಾಗಿದ್ದು ಕಾರವಾರದ ಕಡವಾಡ ಎಂಬಲ್ಲಿ ಗುಡ್ಡ ಕುಸಿತದಿಂದ 19 ಜೀವಗಳು ಬಲಿಯಾಗಿವೆ.ಉತ್ತರಕನ್ನಡ ಜಿಲ್ಲಾಡಳಿತವು ಸಕಾಲಿಕದಲ್ಲಿ ಸೂಕ್ತ ಕ್ರಮವನ್ನು ಕೈಗೊಂಡಿದ್ದುಸಂತ್ರಸ್ತರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಚೆನ್ನಪ್ಪ ಗೌಡ ತಿಳಿಸಿದ್ದಾರೆ.

ಈ ಕುರಿತು ಮಧ್ಯಮದವರೊಂದಿಗೆ ಮಾತನಾಡಿದ ಅವರು ಕಾರವಾರ ತಾಲೂಕಿನಲ್ಲಿ ಬಿದ್ದ ಭಾರಿ ಮಳೆಗೆ ೨೪೬೧ ಜನ ಸಂತ್ರಸ್ತರಾಗಿದ್ದು ೨೩ ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ಮಳೆಯ ಅವಾಂತರಕ್ಕೆ ಸಿಲುಕಿದ ೧೦೭೦ ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಗಂಜಿ ಕೇಂದ್ರಗಳಲ್ಲಿ ಕುಡಿಯು ನೀರು, ಅವಶ್ಯಕ್ಷ ವೈದ್ಯಕೀಯ ಸೇವೆಯನ್ನು ಒದಗಿಸಲಾಗಿದ್ದು ಪ್ರತಿ ಗಂಜಿ ಕೇಂದ್ರಗಳಿಗೆ ಇಬ್ಬರು ಗೃಹ ರಕ್ಷಕ ದಳದವರನ್ನು ನೇಮಿಸಲಾಗಿದೆ, ಮಳೆಯಿಂದಾಗಿ ಅಪಾರ ನಷ್ಟ ಸಂಭವಿಸಿದ್ದು ರಸ್ತೆ ಮತ್ತಿತರ ದುರಸ್ತಿ ಕಾರ್ಯಗಳಿಗಾಗಿ ತಹಸಿಲ್ದಾರ ಹಾಗೂ ನಗರ ಸಭೆಗಳಿಗೆ ೨.೭ ಕೋ ರೂಗಳನ್ನು ನೀಡಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ೧೫ ದೋಣಿಗಳ ಸೌಲಭ್ಯವಿದ್ದು ಉತ್ತರ ಕರ್ನಾಟಕದ ರಾಯಚೂರು ಬಳ್ಳಾರಿ, ನವಲಗುಂದ ಮತ್ತಿತರೆಡೆ ಬೇಡಿಕೆಯಂತೆ ದೋಣಿಗಳನ್ನು ಕಳುಹಿಸಲಾಗಿದ್ದು ನೌಕಾನಲೆಯ ಎರಡು ರಕ್ಷಣಾ ತಂಡಗಳನ್ನು ಗದಗ ಜಿಲ್ಲೆಗೆ ರವಾನಿಸಲಾಗಿದೆ ಎಂದರು.

ಜಿಲ್ಲೆಯಲ್ಲಿನ ಹಾನಿಯ ವಿವಿರ: ಅಕ್ಟೋಬರ್ ತಿಂಗಳಲ್ಲಿ ಜಿಲ್ಲೆಯಾದ್ಯಂತ ಬಿದ್ದ ಅತಿವೃಷ್ಟಿಯಿಂದಾಗಿ ೧೫೦ ಕ್ಕೂ ಹಚ್ಚು ಪಕ್ಕಾ ಮನೆಗಳು ಸಂಪೂರ್ಣವಾಗಿ ಕುಸಿದ್ದಿದ್ದು ಕಾರವಾರ ತಾಲುಕಿನಲ್ಲೆ ೧೪೨ ಮನೆಗಳು ಸಂಪರ್ಣನಾಶಗೊಂಡಿವೆ. ಸಿದ್ದಾಪೂರ ತಾಲುಕಿನಲ್ಲಿ ೮  ಪಕ್ಕಾ ಮನೆಗಳು ಹಾಗೂ ೮೯ ಕಚ್ಚಾ ಮನೆಗಳು ಕುಸಿದುಬಿದ್ದಿವೆ. ಕುಮಟಾ ಹಾಗೂ ಯಲ್ಲಾಪೂರ ತಾಲೂಕುಗಳಲ್ಲಿ ತಲಾ ಒಂದು ಮನೆ ಬಿದ್ದಿದೆ. ಕಾರವಾರದಲ್ಲಿ ೩೬೮ ಪಕ್ಕಾ ಮನೆಗಳು ಭಾಗಶಃ ಹಾನಿಗೊಳಗಾದರೆ ೬೦೬ ಮನೆಗಳು ಅಲ್ಪಸ್ವಲ್ಪ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಸಾರ್ವಜನಿಕ ರಸ್ತೆ ವಿದ್ಯುತ್ ಹಾನಿ ಸೇರಿದಂತೆ ಒಟ್ಟು ೨೩.೨೦ ಕೋಟಿ ರೂ ಹಾನಿ ಸಂಭವಿಸಿದೆ. ೩೦೦೦ ಹೆಕ್ಟೇರ್ ಭತ್ತ ಬೆಳೆಯು ನಾಶವಾಗಿದ್ದು ಸಮೀಕ್ಷೆ ಕಾರ್ಯಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮಳೆಯಿಂದಾಗಿ ೧೨ ಜಾನುವಾರುಗಳು ಕೊಚ್ಚಿ ಹೋಗಿದ್ದು ಕಡವಾಡ ಗುಡ್ಡ ಕುಸಿತದಲ್ಲಿ ೧೯ ಜನರು ಬಲಿಯಾಗಿದ್ದು ಚೆಂಡಿಯಾದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಹಳೆಕೋಟೆ ಮತ್ತು ಬಳ್ಳಬಟ್ಟಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು ಹಾಗೂ ಕಾರವಾರ ಇತರ ಮೂರು ಜನರು ಮೃತಪಟ್ಟಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

ಅಕ್ಟೋಬರ್ ೨ ಹಾಗೂ ೩ ರಂದು ಬಿದ್ದ ಮಳೆ ಪ್ರಮಾಣವನ್ನು ಅಂಕಿ ಸಂಖ್ಯಾ ಇಲಾಖೆಯು ನೀಡಿದ್ದು ಅ೨ ರಂದು ೧೭೯.೬ಮಿಮೀ ಹಾಗೂ ೩ ರಂದು ೪೨೩.೬ ಮಿಮೀ ಮಳೆಯ ದಾಖಲಾಗಿದೆ. ಇದರಿಂದಾಗಿ ನದಿ ಹಾಗೂ ಹಳ್ಳಗಳಲ್ಲಿ ನೀರಿನ ಮಟ್ಟವು ಹೆಚ್ಚಾಗಿದ್ದು ಜನರನ್ನು ರಕ್ಷಿಸಲು ಅಂಕೋಲದಲ್ಲಿ ೬ ಹಾಗೂ ಇತರೆಡೆಗಳಲ್ಲಿ ೧೫ ಬೋಟು ಬಳಕೆಯಾಗಿದೆ. ಸಂತ್ರಸ್ತರನ್ನು ಸ್ಥಳಾಂತರಿಸಲು ೫ ಕೆ.ಎಸ್.ಆರ್.ಟಿ.ಸಿ ಬಸ್ ಸೇರಿದಂತೆ ಒಟ್ಟು ೧೬ ವಹಾನಗಳನ್ನು ಮತ್ತು ಕಾರವಾರ ನಗರ ಸಭೆಯ ಒಂದು ಟಿಪ್ಪರ್ ಸಹ ಬಳಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಧ್ಯಮದವರಿಗೆ ಮಾಹಿತಿಯನ್ನು ನೀಡಿದ್ದಾರೆ. 


Share: